ವಚನ - 89     
 
ಊರ ಮುಂದೆ ಹಾಲತೊರೆ ಇರಲು ನೀರಡಸಿ ಬಂದೆನಲ್ಲಯ್ಯ ನಾನು. ಬರುದೊರೆವೋದವಳನೆನ್ನನಪ್ಪದಿರಯ್ಯಾ. ನೀನೊತಿರ್ದ ಕಾರಣ ಬಂದೆನ್ಲಯ್ಯ. ಹೆರಿಗೆ ಕೂತವಳ ತೆಗೆದಪ್ಪುವನೆಗ್ಗ ನೋಡಾ! ಈ ಸೂನೆಗಾರಂಗೆ ಕುರಿಯ ಮಾರುವರೆ? ಮಾರಿದರೆಮ್ಮವರೆನ್ನ ನಿನಗೆ. ಎನ್ನತ್ತ ಮುಂದಾಗದಿರು, ಎನ್ನಮೇಲೆ ಕಾಲನಿಡದಿರು. ಚೆನ್ನಮಲ್ಲಿಕಾರ್ಜುನಂಗೆ ಸಲೆ ಮಾರುವೋದವಳಾನು.