ವಚನ - 94     
 
ಎನ್ನಂತೆ ಪುಣ್ಯಗೈದವರುಂಟೆ. ಎನ್ನಂತೆ ಭಾಗ್ಯಂಗೈದವರುಂಟೆ. ಕಿನ್ನರನಂತಪ್ಪ ಸೋದರರೆನಗೆ, ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ. ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ.