ವಚನ - 96     
 
ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ. ಎನ್ನ ನಾಸಿಕಕ್ಕೆ ಬಪ್ಪ ಪರಿಮಳ ನಿಮಗರ್ಪಿತ. [ಎನ್ನ ಕರ್ಣಕ್ಕೆ ಬಪ್ಪ ಶಬ್ದ ನಿಮಗರ್ಪಿತ ಎನ್ನ ನೇತ್ರಕ್ಕೆ ಬಪ್ಪ ರೂಪು ನಿಮಗರ್ಪಿತ ಎನ್ನ ಕಾಯಕ್ಕೆ ಸುಖ ನಿಮಗರ್ಪಿತ] ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗರ್ಪಿಸದ ಮುನ್ನ ಮುಟ್ಟಲಮ್ಮೆನಯ್ಯಾ.