ವಚನ - 137     
 
ಕಡೆಗೆ ಮಾಡಿದ ಭಕ್ತಿ, ದೃಢವಿಲ್ಲದಾಳುತನ, ಮೃಡನೊಲಿಯ ಹೇಳಿದಡೆ ಎಂತೊಲಿವನಯ್ಯಾ? ಮಾಡಲಾಗದು ಅಳಿಮನವ, ಮಾಡಿದಡೆ ಮನದೊಡೆಯ ಬಲ್ಲನೈಸೆ? ವಿರಳವಿಲ್ಲದೆ ಮಣಿಯ ಪವಣಿಸಿಹೆನೆಂದಡೆ ಮರುಳಾ, ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯಾ.