ವಚನ - 140     
 
ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ ಕಾಯಕ ನಿವೃತ್ತಿಯಾಗಬೇಕು. ಅಂಗದಲಳವಟ್ಟಲಿಂಗ, ಲಿಂಗೈಕ್ಯಂಗೆ ಅಂಗಸಂಗ ಮತ್ತೆಲ್ಲಿಯದೊ? ಮಹಾಘನವನರಿತ ಮಹಾಂತಂಗೆ ಮಾಯವೆಲ್ಲಿಯದೊ ಚೆನ್ನಮಲ್ಲಿಕಾರ್ಜುನಾ.