ವಚನ - 200     
 
ಚಂದ್ರಕಾಂತದ ಶಿಲೆಗೆ ಬಂದು ಗಜ ಹೋರುವಂತೆ ತನ್ನ ನೆಳಲಿನ್ಗೆ ತಾನೆ ಹೋರಿ ಸಾವಂತೆ ಆನೆಯ ಗತಿ ಆನೆಯ ಮತಿ. ಆನೆಯಹುದು, ಆನೆಯಲ್ಲ, ಅದನೇನೆಂಬೆ? ನೀನೆನ್ನ ಕರಸ್ಥಲದಲ್ಲಿ ಸಿಲ್ಕಿದೆಯಾಗಿ ನೀ ನಾನೆಂಬ ಭ್ರಾಂತೇಕೆ? ನಾನು ನೀನಲ್ಲದೆ ತೆರಹಿಲ್ಲ, ಚೆನ್ನಮಲ್ಲಿಕಾರ್ಜುನಾ.