ವಚನ - 286     
 
ಬಂದಹನೆಂದು ಬಟ್ಟೆಯ ನೋಡಿ, ಬಾರದಿದ್ದಡೆ ಕರಗಿ ಕೊರಗಿದೆನವ್ವಾ. ತಡವಾದಡೆ ಬಡವಾದೆ ತಾಯೆ. ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ ತಕ್ಕೆ ಸಡಲಿದ ಜಕ್ಕವಕ್ಕಿಯಂತಾದೆನವ್ವಾ.