ವಚನ - 376     
 
ಶಿವಶಿವಾ, ಕರ್ಮಕ್ಷಯವಾದಲ್ಲಿ ಕರ್ಮದ ಮಾತ ಕೇಳಿಸಿದೆಯಲ್ಲಯ್ಯಾ? ಪಾಪಲೇಪವಳಿದಲ್ಲಿ ಪಾಪದ ಮಾತ ಕೇಳಿಸಿದೆಯಲ್ಲಯ್ಯಾ? ಶಿವಶಿವಾ, ಭವದ ಬಟ್ಟೆಯನಗಲಿದಲ್ಲಿ ಬಂಧನದ ನುಡಿಯನಾಡಿಸಿದೆಯಲ್ಲಯ್ಯಾ? ಚೆನ್ನಮಲ್ಲಿಕಾರ್ಜುನಯ್ಯಾ, ನೀನೆ ಗಂಡನೆಂದಿದ್ದಲ್ಲಿ, ಪರಪುರುಷರ ಮಾತನಾಡಿಸಿದೆಯಲ್ಲಯ್ಯಾ.