Index   ವಚನ - 5    Search  
 
ಆವಾವ ಭೇದಂಗಳಿಂದ ಬಂದಡೂ ಕಾವುದೊಂದೆ ಭೇದ. ಹೆಣ್ಣು ಹೊನ್ನು ಮಣ್ಣು ಕಾವಲ್ಲಿ ಸಜ್ಜನಂಗಲ್ಲದೆ ಅಶಕ್ಯ ನೋಡಾ. ಅವ ಕಾವಲ್ಲಿಯಾದಡೂ ಭಾವಶುದ್ಧವಾಗಿರಬೇಕು. ಈ ಗುಣ ಅರಿವಿನ ಕುರುಹಿನ ಹಾದಿ; ತುರುಗಾಹಿ ರಾಮನ ಪಥ. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಸುಪಥದ ಪಥ.