Index   ವಚನ - 18    Search  
 
ಆದಿ ಅನಾದಿಗಳಿಲ್ಲದಂದು, ನಾದ ಬಿಂದು ಕಳೆ ಮೊಳೆದೋರದಂದು, ದೇಹ ದೇಹಿಗಳುತ್ಪತ್ತಿಯಾಗದಂದು, ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು, ಸಕಲ ಸಚರಾಚರಂಗಳ ಸುಳುಹಿಲ್ಲದಂದು, ಇವೇನುಯೇನೂ ಇಲ್ಲದಂದು, ನೀನು ಶೂನ್ಯನಾಗಿರ್ದೆಯಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.