Index   ವಚನ - 20    Search  
 
ಅಂಡಜ ಪಿಂಡಜ ಬಿಂದುಜ ಉದಯವಾಗದಂದು, ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ ತತ್ವತ್ರಯಂಗಳ ನಾಮಸೀಮೆಗಳೇನುಯೇನೂ ಇಲ್ಲದಂದು, ಆಚಾರ ಅನಾಚಾರವಿಲ್ಲದಂದು, ಸೀಮೆ ನಿಸ್ಸೀಮೆಯಿಲ್ಲದಂದು, ಗಮನ ನಿರ್ಗಮನವಿಲ್ಲದಂದು, ಪುಣ್ಯಪಾಪ, ಕರ್ಮಧರ್ಮ, ಸ್ವರ್ಗನರಕ, ಇಹಪರವಿಲ್ಲದಂದು ಪರಾತ್ ಪರವಸ್ತು ನೀನೊಬ್ಬನೆ ಇರ್ದೆಯಲ್ಲ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.