Index   ವಚನ - 21    Search  
 
ಪಂಚಭೂತಂಗಳುತ್ಪತ್ತಿ ಇಲ್ಲದಂದು, ಅಂಡಜವಳಯ ರಚಿಸದಂದು, ಚತುರ್ದಶ ಭುವನಂಗಳಿಲ್ಲದಂದು, ಪಂಚಾಶತಕೋಟಿ ವಿಸ್ತೀರ್ಣದ ಅನಂತಕೋಟಿ ಬ್ರಹ್ಮಾಂಡಾದಿ ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು, ನಾನು ನೀನೆಂಬ ವಾಕು ಹುಟ್ಟದಂದು, ಅನಿರ್ವಾಚ್ಯ ಮಹಾಶೂನ್ಯನಾಗಿರ್ದೆಯಲ್ಲ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.