Index   ವಚನ - 27    Search  
 
ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲದ ಕಾರಣ, ಅಡಿಯಿಲ್ಲದ ಮುಡಿಯಿಲ್ಲದ ಒಡಲಿಲ್ಲದ, ಹಿಡಿಯಲಿಲ್ಲದ, ಬಿಡಲಿಲ್ಲದ, ನೋಡಲಿಲ್ಲದ, ನುಡಿಸಲಿಲ್ಲದ, ಕೂಡಲಿಲ್ಲದ ಅಪ್ರತಿಮ ನೀನಾಗಿ, ಅರುಹಿಲ್ಲದ, ಮರಹಿಲ್ಲದ, ಮಹಾಮಹಿಮ ನೀನಾದ ಕಾರಣ, ನಿನ್ನ, ನಿರವಯಲಿಂಗವೆಂದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.