Index   ವಚನ - 41    Search  
 
ಸದ್ರೂಪವೇ ಸಂಗನಬಸವಣ್ಣ ನೋಡಾ. ಚಿದ್ರೂಪವೇ ಚೆನ್ನಬಸವಣ್ಣ ನೋಡಾ. ಆನಂದ ಸ್ವರೂಪವೇ ಪ್ರಭುದೇವರು ನೋಡಾ. ಇದು ಕಾರಣ, ಸದ್ರೂಪವಾದ ಸಂಗನ ಬಸವಣ್ಣನೇ ಗುರು; ಚಿದ್ರೂಪವಾದ ಚೆನ್ನಬಸವಣ್ಣನೇ ಲಿಂಗ; ಆನಂದಸ್ವರೂಪವಾದ ಪ್ರಭುದೇವರೇ ಜಂಗಮವು ನೋಡಾ. ನಿತ್ಯ ನಿರಂಜನ ಪರತತ್ವ ತಾನೆ ಮೂರು ತೆರನಾಯಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.