ಅನಾದಿಕರ್ಮಿಗಳಾಗಿ, ಅವಾಂತರ ಮುಕ್ತರಾದೆವೆಂದು
ಭೇದವಮಾಡಿ ನುಡಿವವರೆಲ್ಲ ಭವಬಾಧೆಯಲ್ಲಿ ಮುಳುಗಿ,
ಭವಪಾಶಂಗಳು ಹರಿಯದೆಯಿಪ್ಪ ಪಶುಭಾವದ ಪರಿಯ ನೋಡಾ.
ಇದು ಕಾರಣ, ಆದಿಯಲ್ಲಿಯು ಮುಕ್ತರು, ಅನಾದಿಯಲ್ಲಿಯು ಮುಕ್ತರು,
ಎಂದೆಂದೂ ಮುಕ್ತರಯ್ಯ ನಿಮ್ಮ ಶರಣರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Anādikarmigaḷāgi, avāntara muktarādevendu
bhēdavamāḍi nuḍivavarella bhavabādheyalli muḷugi,
bhavapāśaṅgaḷu hariyadeyippa paśubhāvada pariya nōḍā.
Idu kāraṇa, ādiyalliyu muktaru, anādiyalliyu muktaru,
endendū muktarayya nim'ma śaraṇaru,
mahāliṅgaguru śivasid'dhēśvara prabhuvē.