Index   ವಚನ - 48    Search  
 
ಆದಿ ಅನಾದಿಗಳೇನೂ ಇಲ್ಲದ ನಿರುಪಮ ಲಿಂಗದಲ್ಲಿ ಅನುಪಮಭಕ್ತಿ ಜನಿಸಿತ್ತು ನೋಡಾ. ಆ ಭಕ್ತಿಯ ಗರ್ಭದಲ್ಲಿ ಸತ್ಯಶರಣನುದಯಿಸಿದನು. ಇದು ಕಾರಣ, ಅನಾದಿ ಕೇವಲ ಮುಕ್ತನೇ ಶರಣನೆಂಬ ವಾಕ್ಯ ಸತ್ಯ ಕಂಡಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.