Index   ವಚನ - 62    Search  
 
ದ್ವೈತಿಯಲ್ಲ ಅದ್ವೈತಿಯಲ್ಲ ಕಾಣಿಭೋ ಶರಣ. ದ್ವೈತಾದ್ವೈತವೆಂಬ ಉಭಯ ಕಲ್ಪನೆಯನಳಿದುಳಿದ ವೀರಮಾಹೇಶ್ವರನು ಪರಶಿವನ ನಿರುತ ಸ್ವಯಾನಂದಸುಖಿ. ಪರಶಿವನ ಪರಮ ತೇಜದಾದಿ ಬೀಜ. ಪರಶಿವನ ಪರಮಜ್ಞಾನಪ್ರಕಾಶಮಯ ಪರಮಾನಂದದ, ನಿರುಪಮಲಿಂಗದ ಪ್ರಭಾಕಿರಣವೇ ತಾನಾದ ಶರಣನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.