Index   ವಚನ - 78    Search  
 
ಇಂತೀ ಹಿಂದೆ ಹೇಳಿದ ವಸ್ತುವ ಬೇರಿಟ್ಟು ತಿಳಿಯಲಿಲ್ಲ. ನಿನ್ನಲ್ಲಿ ಉಂಟು ತಿಳಿದು ನೋಡಯ್ಯ ಮಗನೆ. ನಿನ್ನ ಪಿಂಡದ ಹೊರಗೆ ಭರಿತವಾಗಿ. ತಲೆದೋರದೆ, ಕಾಣಿಸಿಕೊಳ್ಳದೆ ಪಿಂಡಸ್ಥನಾಗಿ ಚಿದ್ರೂಪನದಾನೆ. ಈ ಪಿಂಡಸ್ಥಲದ ಭೇದವ ತಿಳಿಯೆಂದನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.