Index   ವಚನ - 85    Search  
 
ಮಿಂಚಿನ ಪ್ರಭೆಯಲ್ಲಿ ಪಂಚವದನನ ಕಂಡೆನಯ್ಯ. ಸಂಚವಿಲ್ಲದೆ ನಿರೀಕ್ಷಿಸಲು ಪಂಚಪಂಚೀಕೃತಿಯ ಪ್ರಪಂಚು ಪರಿಹಾರವಾಗಿ, ನಿಃಪ್ರಪಂಚ ನಿರ್ಲೇಪಕನಾದೆನು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.