Index   ವಚನ - 89    Search  
 
ಸ್ಫಟಿಕದ ಘಟದೊಳಗೆತ್ತಿದ ಜ್ಯೋತಿ, ಒಳಹೊರಗೊಂದೆ ಸ್ವಯವಾಗಿ ಪ್ರಜ್ವಲಿಸುವಂತೆ, ಎನ್ನೊಳಗಿಪ್ಪಾತನೂ ಹೊರಗಿಪ್ಪಾತನೂ ಒಂದೇ ವಸ್ತುವೆಂಬ ಆದ್ಯಂತವು ಕಾಣುಬಂದಿತ್ತು ನೋಡಾ. ಆ ಪರತತ್ವವೇ ಶರಣ ತಾನೆ ನೋಡಾ. ಬೇರೊಂದು ಸ್ವರೂಪವಲ್ಲ ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.