Index   ವಚನ - 98    Search  
 
ಪಶುವಿನ ಉದರದೊಳಗಿಪ್ಪ ಕ್ಷೀರ ಶಿಶುವಿಂಗಲ್ಲದೆ ಪಶುವಿಂಗಲ್ಲದೆ ಇಪ್ಪ ಪರಿಯಿದೇನೋ? ಪಶುವಿನ ಕಳೇವರದಿಂ ಪೊರಮಟ್ಟು, ಕಾಲಾಗ್ನಿಯಾಗಿ ಪಶುವ ಕೊಂದಿತ್ತು. ಶಿಶುವ ನುಂಗಿತ್ತು. ಪಶುಪತಿಯ ಕೂಡಿ, ಶಿಶುವಿಂಗೆ ಪಶುವಿಂಗೆ ಹೊರಗಾದ ವಿಷಯಾತೀತನು ನಿಮ್ಮ [ರೂಹು,] ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.