Index   ವಚನ - 100    Search  
 
ಮುಚ್ಚಿದ ಕಣ್ಣು ತೆರದುದ ಕಂಡೆ; ಕಿಚ್ಚಿನ ಜ್ವಾಲೆ ಕರವುದ ಕಂಡೆ; ಮೃತ್ಯುಗಳ ಮೊತ್ತ ಕಿತ್ತೋಡುವುದ ಕಂಡೆ; ಕತ್ತಲೆ ಬೆಳಗಾದುದ ಕಂಡೆ; ಬಿಚ್ಚಿ ಬೇರಿಲ್ಲದ ಬೆಳಗೆನ್ನನೊಳಕೊಂಡು ನಿತ್ಯ ಪ್ರಸನ್ನನಾದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.