ಅಯ್ಯಾ, ವಾಕ್ಕನೂ ಮೀರಿ, ಮನಸ್ಸನೂ ಮೀರಿ,
ಅಕ್ಷರಂಗಳನೂ ಮೀರಿ,
ಜ್ಞಾನವನೂ ಮೀರಿ ತೋರುವ ನಿರುಪಮ ವಸ್ತುವೆಂಬುತ್ತಿದ್ದಿರಿ:
ಅದು ರೂಪಾಗಿ, ಎನ್ನ ಕರಸ್ಥಲಕ್ಕೆ ಇಷ್ಟ, ಮನಸ್ಥಲಕ್ಕೆ ಪ್ರಾಣವಾಗಿ,
ಭಾವದಲ್ಲಿ ಭರಿತವಾಗಿ, ತೀವಿ ಪರಿಪೂರ್ಣವಾಗಿ,
ಎಡೆಕಡೆಯಿಲ್ಲದೆಯಿಪ್ಪ ಭೇದವ ಕರುಣಿಸಿದಿರಿಯಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ayyā, vākkanū mīri, manas'sanū mīri,
akṣaraṅgaḷanū mīri,
jñānavanū mīri tōruva nirupama vastuvembuttiddiri:
Adu rūpāgi, enna karasthalakke iṣṭa, manasthalakke prāṇavāgi,
bhāvadalli bharitavāgi, tīvi paripūrṇavāgi,
eḍekaḍeyilladeyippa bhēdava karuṇisidiriyayya
mahāliṅgaguru śivasid'dhēśvara prabhuvē.