Index   ವಚನ - 106    Search  
 
ಮೋಹನ ಮೊಲೆಯ ಮುದ್ದುಮೊಗದ ಭಾವಕಿಯರ, ಲಲ್ಲೆನುಡಿಯೆಂಬ ನಯಗತ್ತಿ ಎಲ್ಲರ ಹೃದಯವ ಕೊರವುತ್ತಿದೆ ನೋಡಾ. ಇನ್ನೆಲ್ಲಿಯ ಅರುಹೋ ಶಿವ ಶಿವಾ, ಬಲ್ಲತನ ಬರುದೊರೆ ಹೋಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.