Index   ವಚನ - 114    Search  
 
ಊರ ಹೊಲನ ಮೇದ ಬಸವ, ಕಾಡುಗಟ್ಟೆಯ ನೀರ ಕುಡಿದು ಕಡೆಯಲ್ಲಿದ್ದ ಪಶುವಿನ ಮಡಿಲ ಮೂಸಿ, ಉಚ್ಚಿಯ ಕುಡಿದು ಹಲ್ಲುಗಿರಿದು ಕ್ರೀಡಿಸುವಂತೆ ಹಸಿವಿನಿಚ್ಚೆಗೆ ನಾಡ ಅಶನವ ತಿಂದು, ವ್ಯಸನದಿಚ್ಛೆಗೆ ಯೋನಿಕಟ್ಟೆಯನರಿಸಿಕೊಂಡು ಹೋಗಿ, ಅಶುದ್ಧದಲ್ಲಿ ಬಿದ್ದು ಹೊರಳುವ ಹಂದಿಯಂತೆ, ಮಾಯಾಮೋಹದ ವಿರಹದೊಳಗೆ ಅಳುತ್ತ ಮುಳುಗುತ್ತ ಇಪ್ಪವರು ದೇವನನೆತ್ತ ಬಲ್ಲರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.