Index   ವಚನ - 116    Search  
 
ಮಲವೊತ್ತಿದರೆ ಹಾಳುಗೇರಿಯಲ್ಲಿ ಬಿಡಬೇಕಯ್ಯ. ಜಲವೊತ್ತಿದರೆ ಬಚ್ಚಲೊಳಗೆ ಬಿಡಬೇಕಯ್ಯ. ಇಂದ್ರಿಯವೊತ್ತಿದರೆ ಯೋನಿಯೆಂಬ ಬಚ್ಚಲೊಳಗೆ ಬಿಡಬೇಕಯ್ಯ. ಸ್ವಾನನೊಂದು ಚರ್ಮವ ಕಚ್ಚಿತಂದು, ತಿಪ್ಪೆಯ ಕೆರದು ಹೂಳಿ, ಮತ್ತೊಂದು ನಾಯಿ ಬಂದು ಕಚ್ಚಿಹಿತೆಂದು ಕಾಯ್ದುಕೊಂಡಿಪ್ಪಂತೆ ತಾನುಚ್ಚೆಯ ಹೊಯಿವ ಬಚ್ಚಲಗುಂಡಿಯ ಜೀವದ ಹೆಣನ ಮನೆಯ ಮರೆಯಲ್ಲಿರಿಸಿಕೊಂಡು, ಮತ್ತೊಂದು ಬಂದು ಕಚ್ಚಿಹಿತ್ತೆಂದು ಕುಕ್ಕನಾಯಂತೆ ಕಾಯ್ದುಕೊಂಡಿಪ್ಪವಂಗೆ ಶಿವಕೃಪೆಯಿನ್ನೆಲ್ಲಿಯದೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.