Index   ವಚನ - 127    Search  
 
ಕಾಮದಿಂದ ಕರಗಿದೆನಯ್ಯ, ಕ್ರೋಧದಿಂದ ಕೊರಗಿದೆನಯ್ಯ; ಲೋಭ ಮೋಹಂಗಳಿಂದ ಅತಿ ನೊಂದೆನಯ್ಯ; ಮದ ಮತ್ಸರಂಗಳಿಂದ ಬೆದಬೆದನೆ ಬೆಂದೆನಯ್ಯ; ಅಹಂಕಾರ ಮಮಕಾರದಿಂದ ಮತಿಮಂದನಾಗಿರ್ದೆನಯ್ಯ; ಇದು ಕಾರಣ, ಎನ್ನ ಕಾಮಾದಿ ಷಡುವರ್ಗಂಗಳ ಕಳದು, ಅಹಂಕಾರ ಮಮಕಾರಂಗಳ ಮಾಣಿಸಿ, ನಿರಹಂಕಾರಿಯೆಂದೆನಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.