Index   ವಚನ - 126    Search  
 
ಊರೊಳಗೆ ಉದಕ ತುಂಬಿ ಬಾಗಿಲೆಲ್ಲಿ ಕೆಸರಾದವು ನೋಡಾ. ಮನೆಯೊಳಗೆ ಕಸ ಹೆಚ್ಚಿ, ಶಶಿಯ ನೆಳಲೀಯದು ನೋಡಿರೆ. ಊರೊಳಗಣ ಉದಕವ ಹೊರಡಿಸಿ, ಬಾಗಿಲೊಳಗಣ ಕೆಸರ ಸುಟ್ಟು, ಮನೆಯೊಳಗಣ ಕಸವ ತೆಗೆದು, ಶಶಿಯ ಸಲಹಿಕೊಂಬುದ ನೀನೊಲಿದು ಕರುಣಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.