ಎನ್ನ ತನು ವಿಕಾರದ ಭಯ, ಎನ್ನ ಮನ ವಿಕಾರದ ಭಯ,
ತನುಮನವನಂಡಲೆವ ಧನ ವಿಕಾರದ ಭಯ ನೋಡಾ.
ಹಗಲು ಹಸಿವಿನ ಚಿಂತೆ, ಇರುಳು ವಿಷಯದ ಚಿಂತೆ;
ಹಗಲಿರುಳು ಸಾವವೊಡಲನೆ ಸಂತವಿಡುತಿಹ ಚಿಂತೆಯದಲ್ಲದೆ
ಸದಾ ಶಿವನ ಧ್ಯಾನ ತತ್ಪರನಾಗಿ
ಶಿವತತ್ವ ವಿಚಾರದೊಳಗೆ ಇರಲೊಲ್ಲೆನು ನೋಡಾ.
ಸುಧೆಯನೊಲ್ಲದೆ ಹಡಿಕೆಗೆ ಮಚ್ಚಿದ
ಸ್ವಾನನ ವಿಧಿಯಂತಾಯಿತ್ತಯ್ಯ.
ಅಮೃತಮಯ ಲಿಂಗ ಸಂಗವನೊಲ್ಲದೆ
ಸಂಸಾರ ಸಂಗಕ್ಕೆ ಮಯ್ಯಾನುವ ಮರುಳು ಮನವೆ
ನಿನ್ನ ನಾನೇನೆಂಬೆನಯ್ಯಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Enna tanu vikārada bhaya, enna mana vikārada bhaya,
tanumanavanaṇḍaleva dhana vikārada bhaya nōḍā.
Hagalu hasivina cinte, iruḷu viṣayada cinte;
hagaliruḷu sāvavoḍalane santaviḍutiha cinteyadallade
sadā śivana dhyāna tatparanāgi
śivatatva vicāradoḷage iralollenu nōḍā.
Sudheyanollade haḍikege maccida
svānana vidhiyantāyittayya.
Amr̥tamaya liṅga saṅgavanollade
sansāra saṅgakke mayyānuva maruḷu manave
ninna nānēnembenayyā?,
Mahāliṅgaguru śivasid'dhēśvara prabhuvē.