Index   ವಚನ - 145    Search  
 
ಪಶುವನೇರಿದ ಕೋಣ ಶಿಶುವೇಧೆಗಾರ ನೋಡಾ. ಪಶುವಿನ ಒಡೆಯ ಬಂದು ಕೋಣನನೆಬ್ಬಟ್ಟಲು ಶಿಶುವಿನ ವೇದನೆ ಮಾಯಿತ್ತು ನೋಡಾ. ಶಿಶುವೆದ್ದು ತನ್ನ ತಾಯನಪ್ಪಲು ತಾಯಿ ತಂದೆಯನೊಡಗೂಡಿ ನಿಂದ ನಿಲವು ತಾನೊಂದೇನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.