ಹಾಳುಕೇರಿಯಲೊಂದು ಹಂದಿಯೂ ನಾಯಿಯೂ
ಮೈಥುನವ ಮಾಡುವದ ಕಂಡು
ಆಕಾಶದಲಾಡಡುವ ಅರಗಿಳಿ ನಗುತ್ತಲಿದೆ ನೋಡಾ,
ಆಡುತ್ತಾಡುತ್ತ ಬಂದ ಅರಗಿಣಿ ಮಾರ್ಜಾಲನ ನುಂಗಲು
ಮಾಯಾವಿಲಾಸ ಅಡಗಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Hāḷukēriyalondu handiyū nāyiyū
maithunava māḍuvada kaṇḍu
ākāśadalāḍaḍuva aragiḷi naguttalide nōḍā,
āḍuttāḍutta banda aragiṇi mārjālana nuṅgalu
māyāvilāsa aḍagittu nōḍā,
mahāliṅgaguru śivasid'dhēśvara prabhuvē.