Index   ವಚನ - 151    Search  
 
ಚಿದಾನಂದಸುಖಮಯವಪ್ಪ ವಸ್ತುವಿಂಗೆ, ಇಂದ್ರಿಯಾನಂದ ಹೊದ್ದಿದಡೆ ನಾ ನೊಂದೆನಯ್ಯ. ನಾನು ಬೆಂದೆನಯ್ಯ. ನಾನು ಚಿದಾನಂದ ಸ್ವರೂಪನು. ಈ ಅನಾನಂದವಿದೇನೋ? ಇದು ಕಾರಣ, ಅನಾಯತವಪ್ಪ ಇಂದ್ರಿಯ ವಿಕಾರವ ಮಾಣಿಸಯ್ಯ ಎನ್ನ ತಂದೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.