ಐವರ ಮುಖದಲ್ಲಿ ಆರುಮಂದಿ ಹುಟ್ಟಿ
ಎಲ್ಲರಿಗೆ ಕೈಯಾಗಿಪ್ಪರು ನೋಡಾ.
ಹಲವರ ಕೈಯೊಳಗಿಪ್ಪ ಒಬ್ಬ ಚಾಂಡಾಲಗಿತ್ತಿ
ಮೂರು ಮುಖದಲ್ಲಿ ಆರೂಢರ ನುಂಗಿದಳು ನೋಡಾ.
ಹಲವು ಕೈಗಳ ಹಾರಹೊಯಿದು
ಮೂರು ಮುಖದಂಗನೆಯರ ಶಿರವ ನೆರೆ ಮೆಟ್ಟಿ ನಿಲ್ಲಬಲ್ಲರೆ
ಆತನು ನಿರ್ಮಾಯನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Aivara mukhadalli ārumandi huṭṭi
ellarige kaiyāgipparu nōḍā.
Halavara kaiyoḷagippa obba cāṇḍālagitti
mūru mukhadalli ārūḍhara nuṅgidaḷu nōḍā.
Halavu kaigaḷa hārahoyidu
mūru mukhadaṅganeyara śirava nere meṭṭi nillaballare
ātanu nirmāyanu kāṇā,
mahāliṅgaguru śivasid'dhēśvara prabhuvē.