Index   ವಚನ - 155    Search  
 
ಮಾರುತನ ಮುಖದ ಮಾನಿನಿ ಆರುಮಂದಿಯ ಹಡೆದಳು ನೋಡಾ. ಅವರು ಮೂರುಲೋಕವ ಕೊಲುವ ವೈರಿಗಳು. ಅವರ ಜಯಿಸುವವರಾರನೂ ಕಾಣೆ! ಅರಿಗಳಾರನು ಕೊಂದಾತ ತ್ರಿಜದೊಡೆಯನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.