Index   ವಚನ - 164    Search  
 
ಒಳಹೊರೆಗೆಂಬ ಉಭಯ ಸಂದೇಹದಿಂದ ಗುರುಶಿಷ್ಯರೆಂದು ನುಡಿದುಕೊಂಡು ನಡೆಯಬೇಕಾಯಿತಲ್ಲದೆ, ಒಳ ಹೊರಗೆಂಬ ಉಭಯ ಸಂದೇಹವಳಿದು ಜೀವ ಪರಮರೆಂದೆಂಬ ಉಭಯವು ಪರಮನೊಬ್ಬನೇಯೆಂದು ತಿಳಿದರೆ, ಗುರುವೇ ಶಿಷ್ಯ; ಶಿಷ್ಯನೇ ಗುರುವಾದುದನೇನೆಂಬೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.