Index   ವಚನ - 181    Search  
 
ಆಯತಲಿಂಗ ಸಂಬಂಧವಿಲ್ಲದಾತ ಅಂಗಭವಿ; ಸ್ವಾಯತಲಿಂಗ ಸಂಬಂಧವಿಲ್ಲದಾತ ಮನಭವಿ; ಸನ್ನಿಹಿತಲಿಂಗವ ಸಂಬಂಧವಿಲ್ಲದಾತ ಆತ್ಮಭವಿ; ಇದು ಕಾರಣ, ಆಯತಲಿಂಗವ ಅಂಗದಲ್ಲಿ ಅಳವಡಿಸಿ, ಸ್ವಾಯತಲಿಂಗವ ಮನದಲ್ಲಿ ಅಳವಡಿಸಿ, ಸನ್ನಿಹಿತಲಿಂಗವ ಆತ್ಮನಲ್ಲಿ ಅಳವಡಿಸಿ, ಅಂಗಮನಪ್ರಾಣದಲ್ಲಿ ಲಿಂಗವ ಧರಿಸಿ ಹೆರೆಹಿಂಗದಿರ್ದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.