ತನು ಶುದ್ಧವಿಲ್ಲ ಎಂಬಾತ
ಅಂಗದ ಮೇಲೆ ಲಿಂಗವ ಧರಿಸಲಾಗದು.
ಮನ ಶುದ್ಧವಿಲ್ಲ ಎಂಬಾತ
ಲಿಂಗವ ಹಿಡಿದು ಪೂಜೆಯ ಮಾಡಲಾಗದು.
ಪ್ರಾಣ ಮಲಿನವೆಂಬ ಪಶುಗಳಿಗೆ ಪ್ರಾಣಲಿಂಗವೆಲ್ಲಿಯದೋ?
ಇದು ಕಾರಣ,
ಆರು ಶೈವದಲ್ಲಿ ನಡೆವುತಿಪ್ಪವರೆಲ್ಲ
ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣ ನೀ ಸಾಕ್ಷಿಯಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.