ಗಂಗಾಸ್ನಾನ ಕೋಟಾನುಕೋಟಿಗಿಂದ
ವಿಭೂತಿಯ ಸ್ನಾನವಧಿಕ ನೋಡಾ.
ಮಂತ್ರಸ್ನಾನ ಕೋಟಾನುಕೋಟಿಗಿಂದ
ವಿಭೂತಿಯ ಸ್ನಾನವಧಿಕ ನೋಡಾ.
ವಿಭೂತಿರೇಣುಮಾತ್ರದಿಂದ ರುದ್ರನಪ್ಪುದು ತಪ್ಪುದು ನೋಡಾ.
ಸರ್ವಾಂಗದಲ್ಲಿ ಶ್ರೀ ವಿಭೂತಿಯ ಉದ್ಧೂಳನವ ಮಾಡಿದಾತನ
ಏನೆಂದುಪಮಿಸುವೆನಯ್ಯ ಆ ಮಹಾತ್ಮನ?
ಆತನು ಜಗತ್ ಪಾವನನು ನೋಡಾ!
ಇಂತಪ್ಪ ಪವಿತ್ರಕಾಯಂಗೆ ನಮೋನಮೋಯೆಂಬೆನು ಕಾಣಾ.
ಆತನು ಪರಮಾತ್ಮ ಸ್ವರೂಪನಾದ ಕಾರಣ.
ಆತನು ಪಂಚಬ್ರಹ್ಮ ಸ್ವರೂಪನಾದ ಕಾರಣ,
ಆ ಮಹೇಶ್ವರಂಗೆ ಶರಣೆಂದು ಬದುಕಿದೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Gaṅgāsnāna kōṭānukōṭiginda
vibhūtiya snānavadhika nōḍā.
Mantrasnāna kōṭānukōṭiginda
vibhūtiya snānavadhika nōḍā.
Vibhūtirēṇumātradinda rudranappudu tappudu nōḍā.
Sarvāṅgadalli śrī vibhūtiya ud'dhūḷanava māḍidātana
ēnendupamisuvenayya ā mahātmana?
Ātanu jagat pāvananu nōḍā!
Intappa pavitrakāyaṅge namōnamōyembenu kāṇā.
Ātanu paramātma svarūpanāda kāraṇa.
Ātanu pan̄cabrahma svarūpanāda kāraṇa,
ā mahēśvaraṅge śaraṇendu badukidenayya,
mahāliṅgaguru śivasid'dhēśvara prabhuvē.