ಶ್ರೀಗುರು ಈ ವಿಭೂತಿಯ ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಲು
ಬ್ರಹ್ಮನ ಉತ್ಪತ್ಯದ ಅಂಡವೊಡೆಯಿತ್ತು ನೋಡಾ.
ಶ್ರೀಗುರು ಈ ವಿಭೂತಿಯನೆ ಅಡಿಗಡಿಗೆ ಧರಿಸಿ ಕಲಿಸಿದನಾಗಿ
ವಿಷ್ಣುವಿನ ಸ್ಥಿತಿಗತಿಯ ಕುಕ್ಷಿಹರಿಯಿತ್ತು ನೋಡಾ.
ಶ್ರೀಗುರು ಈ ವಿಭೂತಿಯ ಸರ್ವಾಂಗದಲ್ಲಿ
ಧರಿಸೆಂದು ಉಪದೇಶಿಸಿದನಾಗಿ,
ಅಂತರಂಗದ ಬಹಿರಂಗದ ಭ್ರಾಂತಿ ಭಸ್ಮವಾಗಿ.
ರುದ್ರನ ಲಯದ ಹೊಡೆಗಿಚ್ಚು ಕೆಟ್ಟಿತ್ತು ನೋಡಾ.
ಶ್ರೀಗುರು ಈ ವಿಭೂತಿಯ ಅನಾದಿ ಚಿತ್ ಸ್ವರೂಪವೆಂದು
ತಿಳುಹಿದನಾಗಿ
ಅನಾದಿ ಸಂಸಿದ್ಧವಾದ ವಿಮಲಭೂತಿಯನೆ ಕ್ರೀಯಿಟ್ಟು
ಅಡಿಗಡಿಗೆ ಧರಿಸುತ್ತಿರ್ದೆನಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Śrīguru ī vibhūtiya enna lalāṭadalli paṭṭava kaṭṭalu
brahmana utpatyada aṇḍavoḍeyittu nōḍā.
Śrīguru ī vibhūtiyane aḍigaḍige dharisi kalisidanāgi
viṣṇuvina sthitigatiya kukṣihariyittu nōḍā.
Śrīguru ī vibhūtiya sarvāṅgadalli
dharisendu upadēśisidanāgi,
antaraṅgada bahiraṅgada bhrānti bhasmavāgi.
Rudrana layada hoḍegiccu keṭṭittu nōḍā.
Śrīguru ī vibhūtiya anādi cit svarūpavendu
tiḷuhidanāgi
anādi sansid'dhavāda vimalabhūtiyane krīyiṭṭu
aḍigaḍige dharisuttirdenayya
mahāliṅgaguru śivasid'dhēśvara prabhuvē.