Index   ವಚನ - 193    Search  
 
ಶ್ರೀಗುರು ಈ ವಿಭೂತಿಯ ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಲು ಬ್ರಹ್ಮನ ಉತ್ಪತ್ಯದ ಅಂಡವೊಡೆಯಿತ್ತು ನೋಡಾ. ಶ್ರೀಗುರು ಈ ವಿಭೂತಿಯನೆ ಅಡಿಗಡಿಗೆ ಧರಿಸಿ ಕಲಿಸಿದನಾಗಿ ವಿಷ್ಣುವಿನ ಸ್ಥಿತಿಗತಿಯ ಕುಕ್ಷಿಹರಿಯಿತ್ತು ನೋಡಾ. ಶ್ರೀಗುರು ಈ ವಿಭೂತಿಯ ಸರ್ವಾಂಗದಲ್ಲಿ ಧರಿಸೆಂದು ಉಪದೇಶಿಸಿದನಾಗಿ, ಅಂತರಂಗದ ಬಹಿರಂಗದ ಭ್ರಾಂತಿ ಭಸ್ಮವಾಗಿ. ರುದ್ರನ ಲಯದ ಹೊಡೆಗಿಚ್ಚು ಕೆಟ್ಟಿತ್ತು ನೋಡಾ. ಶ್ರೀಗುರು ಈ ವಿಭೂತಿಯ ಅನಾದಿ ಚಿತ್ ಸ್ವರೂಪವೆಂದು ತಿಳುಹಿದನಾಗಿ ಅನಾದಿ ಸಂಸಿದ್ಧವಾದ ವಿಮಲಭೂತಿಯನೆ ಕ್ರೀಯಿಟ್ಟು ಅಡಿಗಡಿಗೆ ಧರಿಸುತ್ತಿರ್ದೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.