Index   ವಚನ - 192    Search  
 
ಗಂಗಾಸ್ನಾನ ಕೋಟಾನುಕೋಟಿಗಿಂದ ವಿಭೂತಿಯ ಸ್ನಾನವಧಿಕ ನೋಡಾ. ಮಂತ್ರಸ್ನಾನ ಕೋಟಾನುಕೋಟಿಗಿಂದ ವಿಭೂತಿಯ ಸ್ನಾನವಧಿಕ ನೋಡಾ. ವಿಭೂತಿರೇಣುಮಾತ್ರದಿಂದ ರುದ್ರನಪ್ಪುದು ತಪ್ಪುದು ನೋಡಾ. ಸರ್ವಾಂಗದಲ್ಲಿ ಶ್ರೀ ವಿಭೂತಿಯ ಉದ್ಧೂಳನವ ಮಾಡಿದಾತನ ಏನೆಂದುಪಮಿಸುವೆನಯ್ಯ ಆ ಮಹಾತ್ಮನ? ಆತನು ಜಗತ್ ಪಾವನನು ನೋಡಾ! ಇಂತಪ್ಪ ಪವಿತ್ರಕಾಯಂಗೆ ನಮೋನಮೋಯೆಂಬೆನು ಕಾಣಾ. ಆತನು ಪರಮಾತ್ಮ ಸ್ವರೂಪನಾದ ಕಾರಣ. ಆತನು ಪಂಚಬ್ರಹ್ಮ ಸ್ವರೂಪನಾದ ಕಾರಣ, ಆ ಮಹೇಶ್ವರಂಗೆ ಶರಣೆಂದು ಬದುಕಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.