Index   ವಚನ - 224    Search  
 
ಕಾಯದ ಮೇಲೆ ಲಿಂಗವ ಧರಿಸಿ ದೇವಪೂಜೆಯ ಮಾಡಿ ಕಾಯವಳಿದು ದೇವತಾ ಭೋಗವನೆಯಿದಿಹೆನೆಂಬ ಗಾವಿಲರ ಎನಗೊಮ್ಮೆ ತೋರದಿರಯ್ಯ. ಕಾಯವನು ಜೀವವನು ಲಿಂಗದಲ್ಲಿರಿಸಬಲ್ಲರೆ ಮಹಾದೇವನೆಂದು ಬೇರುಂಟೇ? ಆ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.