Index   ವಚನ - 228    Search  
 
ಇಷ್ಟಲಿಂಗಕ್ಕೆ ಕೊಡದೆ, ಪ್ರಾಣಲಿಂಗಾರ್ಪಿತವ ಮಾಡುವ ಪ್ರಪಂಚಿಗಳಿರ, ಅಂಗದ ಮೇಲಿದ್ದುದು ಲಿಂಗವಲ್ಲವೆ? ಪ್ರಾಣವೆ ಲಿಂಗವಾದರೆ, ಆ ಇಷ್ಟಲಿಂಗವೇತಕ್ಕೆ? ತೆಗೆದೇಕೆ ಬಿಡಿರಿ? ಆ ಲಿಂಗವನೆ ಬಿಡಬಾರದಂತೆ ಆ ಲಿಂಗಾರ್ಪಿತವಿಲ್ಲದೆ ಉಣಬಹುದೆ? ತಥಾಪಿ ಉಂಡಿರಿಯಾದರೆ, ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ. ಶಿವಾರ್ಪಣವಿಲ್ಲದೆ ಬಾಯಿಗೆ ಬಂದಂತೆ ತಿಂಬ ಅನಾಮಿಕರ ಎನಗೊಮ್ಮೆ ತೋರದಿರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.