ತನ್ನಂಗದ ಮೇಲೆ ಶಿವಲಿಂಗವಿದ್ದು
ಸತ್ಕ್ರಿಯಾಮುಖದಿಂದ ಲಿಂಗಾರ್ಪಿತವ ಮಾಡಿ
ಆ ಲಿಂಗ ಪ್ರಸಾದವ ಕೊಂಬುದೆ ಶಿವಾಚಾರ ಪದ ನೋಡಾ!
ಆ ಸದ್ಭಕ್ತನಲ್ಲಿ ಶಿವನಿಪ್ಪನು. ಹೀಂಗಲ್ಲದೆ,
ಅಂತರಂಗದಲ್ಲಿ ಆತ್ಮಲಿಂಗವುಂಟೆಂದು
ಮನ ಭಾವಂಗಳಿಂದರ್ಪಿತವೆಂದು
ಇಷ್ಟಲಿಂಗಾರ್ಪಣವಿಲ್ಲದ ಕರಕಷ್ಟಂಗೆ
ಅವನಿಗೆ ಆವ ಸತ್ಯವು ಇಲ್ಲ; ಆವ ಸದಾಚಾರವು ಇಲ್ಲ;
ಶಿವಜ್ಞಾನವೆಂಬುದು ಮುನ್ನವೆ ಇಲ್ಲ.
ಶಿವಲಿಂಗಾರ್ಪಣ ಹೀನವಾಗಿ ಕೊಂಬುದು ಅದು ಶಿವಜ್ಞಾನವೆ?
ಇಂತಪ್ಪ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Tannaṅgada mēle śivaliṅgaviddu
satkriyāmukhadinda liṅgārpitava māḍi
ā liṅga prasādava kombude śivācāra pada nōḍā!
Ā sadbhaktanalli śivanippanu. Hīṅgallade,
antaraṅgadalli ātmaliṅgavuṇṭendu
mana bhāvaṅgaḷindarpitavendu
iṣṭaliṅgārpaṇavillada karakaṣṭaṅge
avanige āva satyavu illa; āva sadācāravu illa;
śivajñānavembudu munnave illa.
Śivaliṅgārpaṇa hīnavāgi kombudu adu śivajñānave?
Intappa ajñāni holeyara enagom'me tōradirayya,
mahāliṅgaguru śivasid'dhēśvara prabhuvē.