Index   ವಚನ - 236    Search  
 
ಅಟ್ಟಪದಾರ್ಥವೆಲ್ಲವ ಮೆಟ್ಟಿ ಮೆಟ್ಟಿ ತುಂಬಿಸಿಕೊಂಬರಯ್ಯ, ಹೊಟ್ಟೆಗೆ ಕಾಣದ ಅರಿಪಿನಂತೆ. ಇಷ್ಟಲಿಂಗಕ್ಕೆ ಕೊಟ್ಟೆನೆಂದು ಲಿಂಗವ ಬಿಗಿಬಿಗಿದು ಕಟ್ಟಿಕೊಂಡು ಹೊಟ್ಟೆಯ ತುಂಬಿಕೊಂಬ ಭ್ರಷ್ಟರಿಗೆ ಪ್ರಸಾದವೆಲ್ಲಿಯದೊ? ತಟ್ಟುವ ಮುಟ್ಟುವ ಮರ್ಮವನರಿದು ಕಾಯದ ಕರಣದ ಕೈಯಲ್ಲಿ ಇಷ್ಟಲಿಂಗದ ಮುಖವೈದನರಿದು ಕೊಟ್ಟು ಕೊಳಬಲ್ಲರೆ ಪ್ರಸಾದಿಯೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.