Index   ವಚನ - 241    Search  
 
ಒಂದೇ ವೇಳೆ ಪುರುಷಾಹಾರ ಪ್ರಮಾಣಿನಲ್ಲಿ ಗಡಣಿಸಿಕೊಂಡು ಲಿಂಗಕ್ಕೆ ಕೊಟ್ಟು ಲಿಂಗವನವಧರಿಸಿಕೊಂಬಿರಿ. ಮತ್ತೊಂದು ಪದಾರ್ಥ ಬಂದರೆ ಮುಟ್ಟಿ ಅರ್ಪಿಸಲಮ್ಮರು. ಅದೇನು ಕಾರಣ? ಕೈಯೇನು ಎಂಜಲೆ? ಕೈಯೆಂಜಲಾದವಂಗೆ ಬಾಯೆಲ್ಲಾಯೆಂಜಲು. ಬಾಯೆಂಜಲಾದವಂಗೆ ಮೈಯೆಲ್ಲಾಯೆಂಜಲು. ಎಂಜಲೆಂದರೆ ಅಮೇಧ್ಯ. ಅಪವಿತ್ರಕಾಯದಮೇಲೆ ಲಿಂಗವ ಧರಿಸಿಕೊಂಡಿಪ್ಪಿರೆ? ಇಂತಪ್ಪ ಸಂದೇಹಿ ಮಾನವರ ನಿಮ್ಮ ಪ್ರಸಾದಿಗಳು ಮೆಚ್ಚರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.