Index   ವಚನ - 243    Search  
 
ಅಂಗದ ಮೇಲೆ ಲಿಂಗ ಕಾಣಲ್ಪಡುತಿಪ್ಪುದಯ್ಯ. ಅಂಗದೊಳಗೆ ಪ್ರಾಣವಿಪ್ಪುದಯ್ಯ. ತನುವಿನ ಮೇಲಿಪ್ಪ ಲಿಂಗವ ಮನದಲ್ಲಿ ಸ್ವಾಯತಮಾಡಿ ನೆರೆಯಲರಿಯದೆ ಧನ ಕಾಮಿನಿಯರ ಭ್ರಾಂತಿನಲ್ಲಿ ಜಿನುಗುವ ಮನುಜರಿಗೆ ಪ್ರಾಣಲಿಂಗವೆಂದೇನೋ ಹೇಳ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.