Index   ವಚನ - 262    Search  
 
ಕತ್ತಲೆಯನೊಳಕೊಂಡ ಬೆಳಗಿನಂತೆ ಪಕ್ಷಿಯನೊಳಕೊಂಡ ತತ್ತಿಯಂತೆ ಮುತ್ತನೊಳಕೊಂಡ ಚಿಪ್ಪಿನಂತೆ ಸಾಗರವನೊಳಕೊಂಡ ಶಶಿಯಂತೆ ಜಗವನೊಳಕೊಂಡ ಆಕಾಶದಂತೆ ಎನ್ನ ನೀವು ಒಳಕೊಂಡಿರಿಯಾಗಿ ನಾನೋ ನೀನೋ ಏನೆಂದರಿಯೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.