Index   ವಚನ - 263    Search  
 
ಹೊನ್ನು ತನ್ನ ಬಣ್ಣದ ಲೇಸುವ ತಾನರಿಯದಂತೆ ಬೆಲ್ಲ ತನ್ನ ಮಧುರವ ತಾನರಿಯದಂತೆ ಪುಷ್ಪ ತನ್ನ ಪರಿಮಳವ ತಾನರಿಯದಂತೆ ವಾರಿಶಿಲೆ ಅಂಬುವಿನೊಳು ಲೀಯವಾದಂತೆ ಮನವು ಮಹಾಲಿಂಗದಲ್ಲಿ ಲೀಯವಾಗಿ ಮನವಳಿದು ನೆನಹುಳಿದು ನೆನಹು ನಿಃಪತಿಯಾಗಿ ನಾನು ನೀನಾಗಿರ್ದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.