Index   ವಚನ - 266    Search  
 
ತಾಪತ್ರಯಾದಿಗಳಳಿಯವು; ಕೋಪ ಮೋಹಾದಿಗಳ ಸುಟ್ಟುರುಹಲರಿಯರು; ಅಷ್ಟಮದಂಗಳ ಹಿಟ್ಟುಗುಟ್ಟಲರಿಯರು. ಬಟ್ಟಬಯಲ ತುಟ್ಟಿ ತುದಿಯಣ ಮಾತನೇಕೆ ನುಡಿವಿರಣ್ಣಾ? ಕರಕಷ್ಟ ಕರಕಷ್ಟ ಕಾಣಿಭೋ! ಇಂದ್ರಿಯಂಗಳ ಮುಸುಕನುಗಿಯದೆ ವಿಷಯಂಗಳ ಶಿರವನರಿಯದೆ ಕರಣಂಗಳ ಕಳವಳವ ಕೆಡಿಸದೆ ಕರ್ಮೇಂದ್ರಿಯಂಗಳ ಮೂಲದ ಬೇರ ಕಿತ್ತು ಭಸ್ಮವ ಮಾಡದೆ ಕಷ್ಟಕಾಮನ ನಷ್ಟವ ಮಾಡಲರಿಯದೆ ಲಿಂಗನಿಷ್ಠರೆಂಬ ಕಷ್ಟವನೇನೆಂಬೆನಯ್ಯ? ಮೃತ್ಯುಗಳ ಮೊತ್ತವ ಕಿತ್ತೆತ್ತಿ ಕೆದರದೆ ಸತ್ವರಜತಮಂಗಳ ನಿವೃತ್ತಿಯ ಮಾಡದೆ ನಿತ್ಯ ನಿಶ್ಚಿಂತ ನಿರ್ಮಲರೆಂಬ ಕಷ್ಟಯೋಗಿಗಳನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.